ಬೆಂಗಳೂರು: ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆಯಲ್ಲಿ ಮತ್ತೆ ಗೊಂದಲ ಶುರುವಾಗಿದೆ. ರಸಾಯನಶಾಸ್ತ್ರ ಮತ್ತು ಭೌತ ಶಾಸ್ತ್ರ ಪ್ರಶ್ನೆ ಪತ್ರಿಕೆಯಲ್ಲಿ ತಪ್ಪಾಗಿರುವ ಅಂಶ ಬೆಳಕಿಗೆ ಬಂದಿದೆ. ಆದರೆ ಇದನ್ನು ಅಧಿಕೃತವಾಗಿ ಹೇಳಿಕೆ ನೀಡಲು ಪಿಯು ಮಂಡಳಿ ಹಿಂಜರಿಯುತ್ತಿದೆ.
ಪಬ್ಲಿಕ್ ಟಿವಿಗೆ  ಸಿಕ್ಕಿದ ಮಾಹಿತಿ ಪ್ರಕಾರ ತಪ್ಪು ಪ್ರಶ್ನೆ ಮೂಡಿರುವ ರಸಾಯನಶಾಸ್ತ್ರದಲ್ಲಿ 8 ಅಂಕ ಹಾಗೂ ಭೌತಶಾಸ್ತ್ರದಲ್ಲಿ ಒಂದು ಅಂಕ ನೀಡಲು ಶಿಕ್ಷಣ ಇಲಾಖೆ ಆದೇಶಿಸಿದೆಯಂತೆ. ಆದರೆ ಈ ಅಂಕ ಎಲ್ಲಾ ವಿದ್ಯಾರ್ಥಿಗಳಿಗೆ ಸಿಗುವುದಿಲ್ಲ. ಬದಲಿಗೆ ಯಾರು ತಪ್ಪಾಗಿರುವ ಪ್ರಶ್ನೆಗೆ ಉತ್ತರಸಿದ್ದಾರೋ ಅವರಿಗೆ ಮಾತ್ರ ಈ ಅಂಕ ಸಿಗಲಿದೆ.
ಆದರೆ ಈ ಅಂಕವನ್ನು ಗ್ರೇಸ್ ಅಂಕ ಎಂದು ಒಪ್ಪಲು ಇಲಾಖೆ ರೆಡಿ ಇಲ್ಲ. ಇದರ ಬಗ್ಗೆ ಉತ್ತರಿಸಿಬೇಕಾದ ಇಲಾಖೆಯ ನಿರ್ದೇಶಕಿ ಸುಷ್ಮಾಗೋಡಬೋಲೆ ಮತ್ತು ಜಂಟಿ ನಿರ್ದೇಶಕ ರವೀಂದ್ರ ರಿತ್ತಿ ದೂರವಾಣಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಒಂದು ಮಾಹಿತಿಯ ಪ್ರಕಾರ ಈಗಾಗಲೇ ಮೌಲ್ಯಮಾಪಕರಿಗೆ ತಪ್ಪು ಪ್ರಶ್ನೆಗೆ ಉತ್ತರಿಸಿದವರಿಗೆ ಅಂಕ ನೀಡಲು ಪಿಯು ಬೋರ್ಡ್ ಅದೇಶಿಸಿರುವ ಮಾಹಿತಿ ಪಬ್ಲಿಕ್ ಟಿವಿಗೆ ಸಿಕ್ಕಿದೆ.

0 comments :

Post a Comment

 
How to Lose Weight at Home Top